ಶ್ರೀ ಮಹಾವೀರ ಸಂಘದ ಸೇವಾ ಕಾರ್ಯಗಳ ಸಂಕ್ಷಿಪ್ತ ವರದಿ
ಶ್ರೀ ಮಹಾವೀರ ಸಂಘದ ಸೇವಾ ಕಾರ್ಯಗಳ ಸಂಕ್ಷಿಪ್ತ ವರದಿ ಶ್ರೀ 1008 ಆದಿನಾಥ ದಿಗಂಬರ ಜಿನಮಂದಿರ ಕರ್ನಾಟಕ ರಾಜ್ಯದ ಕೇಂದ್ರಬಿಂದು ವಾಣಿಜ್ಯ ಹಾಗೂ ಶೈಕ್ಷಣಿಕ, ಬೆಣ್ಣೆನಗರಿ ದಾವಣಗೆರೆ ದಾನಿಗಳ ಬೀಡು ದೇವನಗರಿ ಎಂದೂ ಪ್ರಚಲಿತವಾಗಿರುತ್ತದೆ.
ದಾವಣಗೆರೆ ನಗರಸಭೆಯು 29-10-1982ರಂದು ನೀಡಿದ್ದ 80X100 ನಿವೇಶನದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಾಗಿ 1996ರಲ್ಲಿ ‘ಮಹಾವೀರ ಜೈನ್ ಹಾಸ್ಟೆಲ್’ ಅನ್ನು ಶ್ರೀ ಮಹಾವೀರ ಸಂಘ (ರಿ.) ವತಿಯಿಂದ ಸಮಸ್ತ ಜೈನ ಶ್ರಾವಕ-ಶ್ರಾವಕಿಯರ ಸಹಕಾರದಿಂದ ನಿರ್ಮಿಸಲಾಯಿತು. ತದನಂತರ ಮಹಾವೀರ ಜೈನ್ ಹಾಸ್ಟೆಲ್ ಅನ್ನು ನವೀಕರಿಸಲಾಯಿತು ಹಾಗೂ ನವೀಕೃತ ಹಾಸ್ಟೆಲ್ ಕಟ್ಟಡ ದಿನಾಂಕ 12-11-2006ರಂದು ಉದ್ಘಾಟನೆಗೊಂಡಿತು.
ಪರಮಪೂಜ್ಯ ರಾಷ್ಟ್ರಸಂತ ಯುವ ಆಚಾರ್ಯಶ್ರೀ 108 ಪ್ರಮುಖಸಾಗರ ಮಹಾರಾಜರು ತಮ್ಮ
ಶ್ರೀ ವಿಹಾರವನ್ನು ದಾವಣಗೆರೆ ನಗರದಲ್ಲಿ ಕೈಗೊಂಡಾಗ ದಾವಣಗೆರೆಯ ಜೈನ ಸಮಾಜಕ್ಕೆ ಜಿನಮಂದಿರದ ಅವಶ್ಯಕತೆಯನ್ನು
ಮನಗಂಡು ದಿನಾಂಕ 02-07-2010 ರಂದು ಹಾಸ್ಟೆಲ್ ಕಟ್ಟಡದಲ್ಲಿ ಸಮಾಜಕ್ಕೆ ಒಂದು ಸಿದ್ದಪರಮೇಷ್ಟಿಗಳ ರತ್ನತ್ರಯ ಮೂರ್ತಿಯನ್ನು
ಸ್ಥಾಪಿಸಿ, ರತ್ನತ್ರಯ ಆರಾಧನೆಯನ್ನು ಕೈಗೊಂಡು ಹಾಸ್ಟೆಲ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಜಿನಮಂದಿರವನ್ನು ಕಟ್ಟಬೇಕೆಂದು ಆದೇಶಿಸಿದರು.
ಈ ಮೂಲಕ ಪೂಜ್ಯಶ್ರೀಗಳ ಪ್ರೇರಣೆಯಿಂದ ಆದಿನಾಥ ಜಿನಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ದಾವಣಗೆರೆಯ ಸಮಸ್ತ ದಿಗಂಬರ
ಜೈನ ಸಮಾಜದ ಬಾಂಧವರ ಸಹಕಾರದಿಂದ ಶ್ರೀ ಮಹಾವೀರ ಸಂಘ (ರಿ.)......