Sree Mahaveera Sangha (R.), Davanagere is dedicated to promoting the values of Jain Dharma, spiritual growth, community welfare, cultural heritage, and social service. Established in 1969, the Sangha continues to serve the Jain community through various religious and charitable activities.
ಶ್ರೀ ಮಹಾವೀರ ಸಂಘದ ಸೇವಾ ಕಾರ್ಯಗಳ ಸಂಕ್ಷಿಪ್ತ ವರದಿ ಶ್ರೀ 1008 ಆದಿನಾಥ ದಿಗಂಬರ ಜಿನಮಂದಿರ ಕರ್ನಾಟಕ ರಾಜ್ಯದ ಕೇಂದ್ರಬಿಂದು ವಾಣಿಜ್ಯ ಹಾಗೂ ಶೈಕ್ಷಣಿಕ, ಬೆಣ್ಣೆನಗರಿ ದಾವಣಗೆರೆ ದಾನಿಗಳ ಬೀಡು ದೇವನಗರಿ ಎಂದೂ ಪ್ರಚಲಿತವಾಗಿರುತ್ತದೆ.
ದಾವಣಗೆರೆ ನಗರಸಭೆಯು 29-10-1982ರಂದು ನೀಡಿದ್ದ 80X100 ನಿವೇಶನದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಾಗಿ 1996ರಲ್ಲಿ ‘ಮಹಾವೀರ ಜೈನ್ ಹಾಸ್ಟೆಲ್’ ಅನ್ನು ಶ್ರೀ ಮಹಾವೀರ ಸಂಘ (ರಿ.) ವತಿಯಿಂದ ಸಮಸ್ತ ಜೈನ ಶ್ರಾವಕ-ಶ್ರಾವಕಿಯರ ಸಹಕಾರದಿಂದ ನಿರ್ಮಿಸಲಾಯಿತು. ತದನಂತರ ಮಹಾವೀರ ಜೈನ್ ಹಾಸ್ಟೆಲ್ ಅನ್ನು ನವೀಕರಿಸಲಾಯಿತು ಹಾಗೂ ನವೀಕೃತ ಹಾಸ್ಟೆಲ್ ಕಟ್ಟಡ ದಿನಾಂಕ 12-11-2006ರಂದು ಉದ್ಘಾಟನೆಗೊಂಡಿತು.
ಪರಮಪೂಜ್ಯ ರಾಷ್ಟ್ರಸಂತ ಯುವ ಆಚಾರ್ಯಶ್ರೀ 108 ಪ್ರಮುಖಸಾಗರ ಮಹಾರಾಜರು ತಮ್ಮ ಶ್ರೀ ವಿಹಾರವನ್ನು ದಾವಣಗೆರೆ ನಗರದಲ್ಲಿ ಕೈಗೊಂಡಾಗ ದಾವಣಗೆರೆಯ ಜೈನ ಸಮಾಜಕ್ಕೆ ಜಿನಮಂದಿರದ ಅವಶ್ಯಕತೆಯನ್ನು ಮನಗಂಡು ದಿನಾಂಕ 02-07-2010ರಂದು ಹಾಸ್ಟೆಲ್ ಕಟ್ಟಡದಲ್ಲಿ ಸಮಾಜಕ್ಕೆ ಒಂದು ಸಿದ್ದಪರಮೇಷ್ಟಿಗಳ ರತ್ನತ್ರಯ ಮೂರ್ತಿಯನ್ನು ಸ್ಥಾಪಿಸಿ, ರತ್ನತ್ರಯ ಆರಾಧನೆಯನ್ನು ಕೈಗೊಂಡು ಹಾಸ್ಟೆಲ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಜಿನಮಂದಿರವನ್ನು ಕಟ್ಟಬೇಕೆಂದು ಆದೇಶಿಸಿದರು. ಈ ಮೂಲಕ ಪೂಜ್ಯಶ್ರೀಗಳ ಪ್ರೇರಣೆಯಿಂದ ಆದಿನಾಥ ಜಿನಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ದಾವಣಗೆರೆಯ ಸಮಸ್ತ ದಿಗಂಬರ ಜೈನ ಸಮಾಜದ ಬಾಂಧವರ ಸಹಕಾರದಿಂದ ಶ್ರೀ ಮಹಾವೀರ ಸಂಘ (ರಿ.) ಕೈಗೆತ್ತಿಕೊಂಡಿತು. ದಿನಾಂಕ 17-03-2011ರಂದು ನೂತನ ಶ್ರೀ ಆದಿನಾಥ ಜಿನಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಾಯಿತು. ಗರ್ಭಗುಡಿಯ ವಾಸ್ತುವಿನ್ಯಾಸ ಕಾರ್ಯವನ್ನು ಕನಕಗಿರಿಯ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾರ್ಗದರ್ಶನ ನೀಡಿ ಆಶೀರ್ವದಿಸಿರುತ್ತಾರೆ.
ದಾವಣಗೆರೆಯ ಹಾಗೂ ಇತರ ಸ್ಥಳಗಳ ಶ್ರಾವಕ-ಶ್ರಾವಕಿಯರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತನು-ಮನ-ಧನದಿಂದ ತುಂಬು ಸಹಕಾರ ನೀಡಿದರು.
ಪರಮಪೂಜ್ಯ ರಾಷ್ಟ್ರಸಂತ ಯುವ ಆಚಾರ್ಯಶ್ರೀ 108 ಪ್ರಮುಖಸಾಗರ ಮಹಾರಾಜರು ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಸಲಹೆಯ ಮೇರೆಗೆ ರಾಜಸ್ಥಾನದ ಕಿಶನ್ ಗಂಜ್ ಜಿಲ್ಲೆಯ ಶಿಲ್ಪಿ ರಾಮಾವತಾರ್ ಇವರಿಂದ ಜೈಸಲ್ಮಾರ್ ಶಿಲೆಯ ಸುಮಾರು 7 ಅಡಿ ಎತ್ತರದ ಭಗವಾನ್ 1008 ಆದಿನಾಥ ತೀರ್ಥಂಕರರ ಬೃಹತ್ ಮೂರ್ತಿಯನ್ನು ಕೆತ್ತನೆ ಮಾಡಿಸಲಾಯಿತು.
ದಿನಾಂಕ 18-3-2013ರಂದು ಮೂಲಸ್ವಾಮಿಯ ಮೂರ್ತಿಯನ್ನು ಮೌನಿಬಾಬ ಪರಮಪೂಜ್ಯ ಮುನಿಶ್ರೀ 108 ಡಾ. ಪ್ರಣಾಮಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಗರ್ಭಗುಡಿಯಲ್ಲಿ ಪೀಠಾರೋಹಣ ಕಾರ್ಯ ನೆರವೇರಿಸಲಾಯಿತು.
ದಿನಾಂಕ 20-11-2013 ರಿಂದ 24-11-2013ರ ವರೆಗೆ ವರ್ಷಗಳ ಪಂಚಕಲ್ಯಾಣ ಕಾರ್ಯಕ್ರಮ ದಾವಣಗೆರೆ ಜೈನ ಸಮಾಜದ ಇತಿಹಾಸದಲ್ಲೆಯೇ ಹಿಂದೆಂದೂ ಕಂಡರಿಯದ ರೀತಿ ಅದ್ದೂರಿಯಾಗಿ ಪರಮಪೂಜ್ಯ 108 ಮುನಿಶ್ರೀ ಪುಣ್ಯಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪ್ರಪ್ರಥಮವಾಗಿ ಜಿನಮಂದಿರಕ್ಕೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ ಮೂಲಕ ಕಾರ್ಯಕ್ರಮ ನೆರವೇರಿಸಲಾಯಿತು.
ಅಂದಿನಿಂದ 12 ವರ್ಷಗಳಿಂದ ಶ್ರೀ ಮಹಾವೀರ ಸಂಘವು ಸಮಾಜ ಬಾಂಧವರ ಸಹಕಾರದಿಂದ ಜಿನಮಂದಿರ ಆವರಣದಲ್ಲಿ ಚಾವಣಿ ಮತ್ತು ಸಭಾ ವೇದಿಕೆ, ಶ್ರೀ ಶಾಂತಿ ಸಾಗರ ತ್ಯಾಗಿ ನಿವಾಸ, ಪುರೋಹಿತರ ಮನೆ, ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಬೆಳ್ಳಿ ಹೊದಿಕೆ ದಾನಿಗಳಿಂದ ಶ್ರೀ ಚಕ್ರೇಶ್ವರಿ ಮಾತೆ ಮತ್ತು ಶ್ರೀ ಪದ್ಮಾವತಿ ಅಮ್ಮನವರಿಗೆ ಬೆಳ್ಳಿ ಮುಖವಾಡ, ಬೆಳ್ಳಿಯ ಶ್ರೀ ಅನಂತನಾಥ ತೀರ್ಥಂಕರರ ಮೂರ್ತಿ, ಶ್ರೀ ಆದಿನಾಥ ತೀರ್ಥಂಕರರಿಗೆ ಬೆಳ್ಳಿ ಮುಕುಟ ಹಾಗೂ ದಾನಿಗಳಿಂದ ಡೀಸೆಲ್ ಜನರೇಟರ್ ಪಡೆಯಲಾಗಿದೆ. ಹಾಸ್ಟೆಲ್‌ನಲ್ಲಿ 22 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕೊಠಡಿ ವ್ಯವಸ್ಥೆ, ಪೀಠೋಪಕರಣ, ಮತ್ತು ಇದೀಗ ಸೋಲಾರ್ ವಾಟರ್ ಹೀಟರ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ಮುಂದುವರೆದು ಜಿನ ಮಂದಿರ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಅವಶ್ಯಕತೆಗೆ ಒಳಪಟ್ಟು ವಿದ್ಯುತ್ ಉಪಯೋಗಕ್ಕಾಗಿ ಅತ್ಯಾಧುನಿಕ ಸೌರ ಘಟಕವನ್ನು (Solar Panel) ಸ್ಥಾಪಿಸಲು ಉದ್ದೇಶಸಲಾಗಿದೆ. ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಮಹಾವೀರ ಸಂಘವು ನಿರಂತರವಾಗಿ ಮಾಡುತ್ತಾ ನಿರ್ವಹಿಸಿಕೊಂಡು ಬಂದಿರುತ್ತದೆ.
ಈ ಹಿಂದೆ ಹೈಕೋರ್ಟ್ ನಲ್ಲಿ ಹೋರಾಡಿ ಸ್ಥಳೀಯ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 10000 ಚದರಡಿಯ CA ನಿವೇಶನವನ್ನು ಅತ್ಯಂತ ಪರಿಶ್ರಮದಿಂದ 2007ರಲ್ಲಿ ಪಡೆದು, ಈ ನಿವೇಶನದಲ್ಲಿ 'ಸಮುದಾಯ ಭವನ'ವನ್ನು ಸರ್ಕಾರದ ಸಹಾಯಧನದಿಂದ ಮತ್ತು ಸಮಾಜ ಬಾಂಧವರ ಸಹಕಾರದಿಂದ ನಿರ್ಮಾಣ ಮಾಡುವುದಕ್ಕೆ ನೀಲನಕ್ಷೆ ತಯಾರಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ರೀತಿ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ ದಾವಣಗೆರೆ ದಿಗಂಬರ ಜೈನ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ನಿಮ್ಮಗಳ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.